ಕುಲಗೌರವ
Posted date: 28/January/2010

ಧಾರಾವಾಹಿಗಳು ಮಾನವನ ದೈನಂದಿನ ಜೀವನದ ಮೇಲೆ ಬೆಳಕು ಚೆಲ್ಲುವಂತಿರಬೇಕು. ಪರದೆಯ ಮೇಲೆ ಕಾಣಿಸಿಕೊಳ್ಳುವ ಪಾತ್ರಗಳ ಮೂಲಕ ಸಾಮಾಜಿಕ ಜೀವನದಲ್ಲಿ ಜನಸಾಮಾನ್ಯನಿಗಿರುವ ಸ್ಥಾನಮಾನ, ಜವಾಬ್ದಾರಿ, ಒಳಿತು- ಕೆಡುಕುಗಳನ್ನು ಅರ್ಥೈಸಿಕೊಳ್ಳುವಂತಹ ಅತ್ಯುತ್ತಮ ಕಥೆಯನ್ನು  ಧಾರಾವಾಹಿಗಳ ಮೂಲಕ ಹಂತ-ಹಂತವಾಗಿ ಬಿತ್ತರಿಸಿದ ಕೀರ್ತಿ ಈಟೀವಿ ಕನ್ನಡ ವಾಹಿನಿಯದು. ಇದೇ    ಹಾದಿಯಲ್ಲಿ ಮುಂದುವರೆಯುತ್ತಿರುವ ವಾಹಿನಿ  ಕುಲಗೌರವ ಎಂಬ ಮತ್ತೊಂದು ನೂತನ ಧಾರಾವಾಹಿಯನ್ನು ಫೆಬ್ರವರಿ ೦೧ ,೨೦೧೦ ರಿಂದ ಪ್ರತಿ ಸೋಮವಾರದಿಂದ ಶನಿವಾರದವರೆಗೆ ಸಂಜೆ ೬-೩೦ ಕ್ಕೆ ಪ್ರಸಾರ ಮಾಡುತ್ತದೆ.
    ಗುಪ್ತಗಾಮಿನಿ,ಬಿದಿಗೆ ಚಂದ್ರಮ, ಯಾವ ಜನ್ಮದ ಮೈತ್ರಿ ಹಾಗೂ ಅಗ್ನಿಶಿಖೆಯಂತಹ ಹಲವಾರು ಧಾರಾವಾಹಿಗಳ ನಿರ್ಮಾಣದ ಖ್ಯಾತಿಯ ಮಣಿಪಾಲ ಎಂಟರ್‌ಟೇನ್‌ಮೆಂಟ್ ನೆಟ್‌ವರ್ಕ್ ಸಂಸ್ಥೆಯಡಿಯಲ್ಲಿ ಶ್ರೀಮತಿ ಸಂಧ್ಯಾಪೈ ಕುಲಗೌರವ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.
ಕುಲಗೌರವ ಮೂವರು ಧೈರ್ಯವಂತ ಮಹಿಳೆಯರ ಕಥೆ. ಇಂದಿನ ಸಮಾಜದಲ್ಲಿ ಬೇರುಬಿಟ್ಟಿರುವ ಗೊಡ್ಡು ಸಂಪ್ರದಾಯಗಳ ವಿರುದ್ಧ ಎದ್ದು ನಿಲ್ಲುವಂತಹ ಮೂರು ವಿಭಿನ್ನ ತಲೆಮಾರಿನ ಮೂವರು ಸ್ತ್ರೀಯರ ಸುತ್ತ ಕಥೆ ಹೆಣೆಯಲಾಗಿದೆ. ಹಾಗೂ ಸಮಾಜದಲ್ಲಿ ಮಹಿಳೆ, ವಿಧವೆ ಮತ್ತು ಅವಿವಾಹಿತೆ ಹಾಗೂ ಮದುವೆಯಾದ ಮಹಿಳೆಯರ ಸ್ಥಿಗತಿಗತಿಗಳ ಮೇಲೆ ಧಾರಾವಾಹಿ ಬೆಳಕು ಚೆಲ್ಲುತ್ತದೆ.  
ಪ್ರತಿಯೊಬ್ಬ ತಂದೆ  ತನ್ನ ಮಗಳನ್ನು ಸಂಪ್ರದಾಯಬದ್ಧವಾಗಿ ವರನಿಗೆ  ಕನ್ಯಾದಾನ ಮಾಡಿಕೊಡುವುದು   ವಾಡಿಕೆ. ಆದರೆ ಕುಲಗೌರವದಲ್ಲಿ ಸಿಂಧೂರ ವಿಧವೆಯಾಗಿರುವ ತನ್ನ ಅಣ್ಣನ ಹೆಂಡತಿ ಅಂಜಲಿಯನ್ನು ಕನ್ಯಾದಾನ ಮಾಡುತ್ತಾಳೆ!. ಹಾಗೆಯೇ ವಿಧವಾ ತಾಯಿಯನ್ನು ಮರುಮದುವೆಯಾಗುವಂತೆಯೂ ಒತ್ತಾಯಿಸುತ್ತಾಳೆ. ಹೀಗೆ ಇಂದಿನ ಆಧುನಿಕ ಯುಗದಲ್ಲಿ ಬದುಕುತ್ತಿರುವ ಮಹಿಳೆ ಗೊಡ್ಡು ಸಂಪ್ರದಾಯಗಳಿಗೆ ಬಲಿಯಾಗಿ ಪುರುಷಪ್ರಧಾನ ಸಮಾಜ ಸೃಷ್ಠಿಸಿದ ಅಸಂಬದ್ಧವಾದ ಸಂಪ್ರದಾಯಗಳನ್ನು ಆಚರಿಸಿಕೊಂಡು ಹೋಗುತ್ತಿರುವ ಪದ್ಧತಿಯ ವಿರುದ್ಧ ನಿಲ್ಲುವ ಸಿಂಧೂರಳ ಕಥೆಯಾಗಿದೆ.
ಈ ಆಧುನಿಕ ಕಾಲದಲ್ಲಿ ಮಹಿಳೆ ಬಲಿಯಾದ  ಮೌಢ್ಯ ಸಂಪ್ರದಾಯಗಳನ್ನು ವಿರೋಧಿಸಿ ನೂತನ ವ್ಯಾಖ್ಯಾನವನ್ನು  ನೀಡಲು ಕುಲಗೌರವ ಮುಂದಡಿಯಿಟ್ಟಿದೆ.
ಒಟ್ಟಿನಲ್ಲಿ ಆಧುನಿಕ ಕಾಲದಲ್ಲಿ ಮಹಿಳೆಗೆ ಅಡ್ಡಗಾಲಾಗಿರುವ ಗೊಡ್ಡು ಸಂಪ್ರದಾಯಗಳನ್ನು ತೊಡೆದುಹಾಕುವುದರ ಮೂಲಕ ಮಹಿಳೆಯರ ಸ್ವಶಕ್ತೀಕರಣ ಅಥವಾ ಸಬಲತೆಯನ್ನು ಪ್ರೋತ್ಸಾಹಿಸುವಂತಹ ಧಾರಾವಾಹಿ ಇದಾಗಿದೆ.
 ಮಹಾಲಕ್ಷ್ಮೀ, ರೂಪಾ ಮತ್ತು ಮಧು ಹೆಗ್ಡೆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಗಳಾಗಿ ಅಭಿನಯಿಸುವರು.

ವಿವರ :-
ಧಾರಾವಾಹಿ ಹೆಸರು - ಕುಲಗೌರವ
ಪ್ರಸಾರ ಸಮಯ - ಸಂಜೆ ೬-೩೦ಕ್ಕೆ
ಪ್ರಸಾರ ದಿನ - ಪ್ರತಿ ಸೋಮವಾರದಿಂದ ಶನಿವಾರದವರೆಗೆ
ಪ್ರಸಾರ ಪ್ರಾರಂಭ - ಫೆಬ್ರವರಿ ೦೧,೨೦೧೦

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed